ಕಥೆ-898
ಲೆಮನ್ ಆ್ಯಂಡ್ ದಿ ಸ್ಪೂನ್
ನಾವೆಲ್ಲರೂ ವಿದ್ಯಾರ್ಥಿಯಾಗಿದ್ದಾಗಲೇ ಒಂದಲ್ಲ ಒಂದು ಗುರಿಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ, ಬರೀ ವಿದ್ಯೆ ಅಥವಾ ಕೆಲಸ ಮಾತ್ರ ಮುಖ್ಯವಲ್ಲ. ಒಂದು ಸಮತೋಲಿತ ಮತ್ತು ಯಶಸ್ವಿ ಜೀವನವನ್ನು ನಡೆಸುವ ಗುರಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲಿ ನಾನು ಯಶಸ್ವಿ ಎನ್ನುವುದಕ್ಕಿಂತ ಸಮತೋಲಿತ ಎಂದು ಹೇಳುವುದಕ್ಕೆ ಕಾರಣವಿದೆ. ಸಮತೋಲಿತ ಎಂದರೆ ಮುಖ್ಯವಾಗಿ ಆರೋಗ್ಯ, ಸಂಬಂಧಗಳು ಮತ್ತು ಈ ಮನಃಶಾಂತಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು
ಎಂದರ್ಥ.
ಏಕೆಂದರೆ, ಕಡ್ಲಿ ತಿನ್ನಬೇಕೆನ್ನುವ ಆಸೆ ಆಗಿದೆ ಆದರೆ ಹಲ್ಲುಗಳೇ ಇಲ್ಲ, ಬೆನ್ನು ನೋಯುವಾಗ ಕಾರು ಓಡಿಸುವುದರಲ್ಲಿ ಅರ್ಥವಿಲ್ಲ.
ಶಾಪಿಂಗ್ ಮಾಡುವಾಗ ತಲೆ ತುಂಬಾ ಟೆನ್ಸನ್ಗಳಿದ್ದರೆ ಅದರಲ್ಲಿ ಅರ್ಥವೇ ಇಲ್ಲ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ, ಲೆಮನ್ ಆ್ಯಂಡ್ ದಿ ಸ್ಪೂನ್ ರೇಸ್ ಆಡಿರುತ್ತೇವೆ. ಬಾಯಲ್ಲಿ ಒಂದು ಚಮಚವನ್ನು ಕಚ್ಚಿಹಿಡಿದು, ಅದರ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ಓಡಬೇಕು. ನಾವು ಮೊದಲು
ಬಂದರೂ, ಸ್ಪೂನಿನಿಂದ ನಿಂಬೆ ಬಿದ್ದರೆ ಪ್ರಯೋಜನವಿಲ್ಲ. ಇದು
ಬರೀ ಕ್ರೀಡೆಯಲ್ಲ. ಪ್ರತಿಯೊಬ್ಬರ ಜೀವನಕ್ಕೂ ಅನ್ವಯ. ಇಲ್ಲಿ ಆರೋಗ್ಯ ಮತ್ತು ಸಂಬಂಧಗಳೆನ್ನುವುದು ನಿಂಬೆ ಇದ್ದಂತೆ. ಸರಿಯಾಗಿ ಬ್ಯಾಲೆನ್ಸ್ ಮಾಡಿದರೆ ಮಾತ್ರ ನಾವು ಯಾವುದೇ ಸಮಸ್ಯೆ ಇಲ್ಲದೆಣದಡ ಮುಟ್ಟುವುದಕ್ಕೆ ಸಾಧ್ಯ. ಇಲ್ಲದಿದ್ದರೆ ನಾವು ದಡವನ್ನೇನೋ ಮುಟ್ಟುತ್ತೇವೆ. ಆದರೆ, ನಿಂಬೆ ಎಲ್ಲೋ ಕೆಳಗೆ ಬಿದ್ದು ಹೋಗಿರುತ್ತದೆ.
| ಚೇತನ್ ಭಗತ್ ಖ್ಯಾತ ಲೇಖಕ
No comments:
Post a Comment