Wednesday, October 1, 2025

 ಕಥೆ-892

ಯಶಸ್ವಿಯಾಗುವುದು ಹೇಗೆ?

https://basapurs.blogspot.com/

ನಮ್ಮ ದೇಶದ ಮುಂದಿನ ಪೀಳಿಗೆ ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ? ಹಾಗಾಗಬೇಕು ಎಂದರೆ ಏನು ಮಾಡಬೇಕು? ನಿಯಮಗಳೇನು? ಯಾವ ದಾರಿಯಲ್ಲಿ ಸಾಗಬೇಕು? ಹೀಗೆ ಹಲವು ಪ್ರಶ್ನೆಗಳು ಶಾಲೆಯ ಅಥವಾ ಕಾಲೇಜು ವಿದ್ಯಾರ್ಥಿಗಳು ನನ್ನನ್ನು ಕೇಳುತ್ತಾರೆ. ಅವರಿಗೆಲ್ಲ ಉತ್ತರ ನೀಡುವುದಾದರೆ, ಯಶಸ್ಸು ಸಿಗಬೇಕು ಎಂದರೆ ಅದಕ್ಕೆ ನಾಲ್ಕು ಮಂತ್ರಗಳಿವೆ. ಅವುಗಳನ್ನು ಪಾಲಿಸಬೇಕು. ಆಗ, ಜೀವನದಲ್ಲಿ ನಾವು ಅಂದುಕೊಂಡಂತೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. 


ಮೊದಲನೇಯದಾಗಿ, ದೊಡ್ಡದಾದ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಎಲ್ಲಿಗೆ ಹೋಗಬೇಕು ಎನ್ನುವ ಗುರಿಯನ್ನು ಇಟ್ಟುಕೊಳ್ಳದೆ ಶುರು ಮಾಡಿದರೆ ಕಳೆದು ಹೋಗುತ್ತೇವೆ.


ಎರಡನೇಯದಾಗಿ ನಿರಂತರವಾಗಿ ಕಲಿಯುತ್ತಿರಬೇಕು. ಹೊಸತೇನೋ ಒಂದು ನಮ್ಮ ಕಣ್ಮುಂದೆ ಸಿಕ್ಕಾಗ ಅದನ್ನು ಏನು ಎಂದು ಅರ್ಥಮಾಡಿಕೊಳ್ಳಲು ಕಲಿಯಬೇಕು.. ಇದು ನನಗೆ ಗೊತ್ತಿಲ್ಲ ಎಂದು ತಿರಸ್ಕರಿಸಿ ಮುನ್ನಡೆಯಬಾರದು..


ಮೂರನೇಯದಾಗಿ ಪರಿಶ್ರಮ. ಮಾಡುವ ಕೆಲಸವನ್ನು ಶ್ರದ್ದೆ ಮತ್ತು ಪರಿಶ್ರಮದೊಂದಿಗೆ ಮಾಡಬೇಕು. ಹಾಗೆ ಹಾಕಿದ ಶ್ರಮಕ್ಕೆ ಖಂಡಿತ ಫಲ ಇದ್ದೇ ಇರುತ್ತದೆ. 


ನಾಲ್ಕನೇಯದಾಗಿ ನಿರಂತರತೆ. ಯಾವುದೇ ಒಂದು ಕೆಲಸವನ್ನು ಶುರು ಮಾಡಿದರೂ, ದಾರಿಯಲ್ಲಿ ಎದುರಾಗುವ ಕಷ್ಟಗಳಿಂದ ಅಥವಾ ಅಡಚಣೆಗಳ ಕಾರಣಕ್ಕೆ ಆ ಕೆಲಸವನ್ನು ಅರ್ಧಕ್ಕೆ ಕೈಬಿಡಬಾರದು. ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು.


-ಅಬ್ದುಲ್ ಕಲಾಂ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು