Wednesday, December 3, 2025

 

ಕಥೆ-962

ವಿಶ್ವದ ಲೆಕ್ಕ ಬದಲಾಯಿಸಿದ ಭಾರತೀಯ ವಿಜ್ಞಾನಿಯ ಒಂದು ಲೆಕ್ಕ

https://basapurs.blogspot.com


ವಿಶ್ವದ ಭೌತಶಾಸ್ತ್ರ ವಿಭಾಗದಲ್ಲಿ ಅತ್ಯಂತ ದೊಡ್ಡ ಗೌರವಗಳು ಯೂರೋಪ್ ನವರಿಗೆ ಮಾತ್ರ ಸೀಮಿತವಾಗಿದ್ದ ಕಾಲ ಅದು.

 

ಭಾರತದ ಒಂದು ಚಿಕ್ಕ ಕೋಣೆಯಲ್ಲಿ, ಭಾರತೀಯ ಒಬ್ಬ ವಿಜ್ಞಾನಿ ರಾತ್ರಿ 3 ಗಂಟೆಗೂ ಲೆಕ್ಕ ಹಾಕುತ್ತಿದ್ದ. ಲೆಕ್ಕದಲ್ಲಿ ಯೂರೋಪಿನ ವಿಜ್ಞಾನಿಗಳು ಮಾಡಿರುವ ಲೆಕ್ಕದಲ್ಲಿ ತಪ್ಪು ಕಂಡುಬಂದಿತ್ತು.

ಕಣಗಳು ಹೇಗೆ ವರ್ತಿಸುತ್ತವೆ ಎಂಬುದರ ಹೊಸ ಸೂತ್ರವನ್ನು ಕಂಡುಹಿಡಿದಿದ್ದರೂ,

ಯಾವ ಪತ್ರಿಕೆಗಳೂ ಅವರ ಲೇಖನವನ್ನು ಸ್ವೀಕರಿಸಲಿಲ್ಲ.


ಯಾರೂ ಅವರ ಸಂಶೋಧನೆಗೆ ಮಾನ್ಯತೆ ಕೊಡದೆ ಇದ್ದಾಗ, ಗಟ್ಟಿ ನಿರ್ಧಾರ ಮಾಡಿ ಆಗಿನ ಪ್ರಸಿದ್ಧ ವಿಜ್ಞಾನಿ ಐನ್ಸ್‌ಟೀನ್‌ಗೆ ಪತ್ರ ಬರೆದರು, ತಮ್ಮ ಲೇಖನ ಕಳುಹಿಸಿದರು.

ಪತ್ರ ಕಳುಹಿಸಿದ ಬಳಿಕ ಅನೇಕ ದಿನಗಳು ಉತ್ತರವೇ ಬಂದಿಲ್ಲ.

ಆದರೂ ಪ್ರತಿದಿನ ಅಂಚೆಪೆಟ್ಟಿಗೆಯನ್ನು ತೆರೆದು ನೋಡುತ್ತಿದ್ದ—

ಭರವಸೆಯೊಂದಿಗೆ. ಆತಂಕದೊಂದಿಗೆ.


ಅಚ್ಚರಿ ಎಂದರೆ ಒಂದು ದಿನ, ಐನ್‌ಸ್ಟೈನ್‌ ಅವರಿಂದ ಉತ್ತರ ಬಂದಿತ್ತು


ನಿಮ್ಮ ಕೆಲಸ ಅಪಾರ ಮಹತ್ವದ್ದಾಗಿದೆ. ನಾನು ಸ್ವತಃ ಇದನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿ ಪ್ರಕಟಿಸುತ್ತೇನೆ.


ವಿಶ್ವದ ಎಲ್ಲ ವಿಜ್ಞಾನಿಗಳು ಓದುವ ಜರ್ಮನ್ ಜರ್ನಲ್‌ನಲ್ಲಿ ಪತ್ರಿಕೆಗಳಲ್ಲಿ ಬೋಸ್ ಅವರ ಲೇಖನ ಪ್ರಕಟವಾಯಿತು.

ಇದರಿಂದ ಹೊಸ ಕಣಗಳ ವರ್ಗ ಬೋಸಾನ್‌ಗಳು ಹುಟ್ಟಿದವು.

ತಪ್ಪು ಎಂದುಕೊಳ್ಳುವುದನ್ನು ಪ್ರಶ್ನಿಸುವ ಧೈರ್ಯವೇ ಜ್ಞಾನಕ್ಕೆ ದಾರಿಯಾಯಿತು.

ಒಬ್ಬ ಭಾರತೀಯನ ಲೆಕ್ಕ ಜಗತ್ತಿನ ಭೌತಶಾಸ್ತ್ರದ ಲೆಕ್ಕವನ್ನೇ ಬದಲಿಸಿತು. ಅದನ್ನು ಬದಲಿಸಿದ್ದು ಹೆಮ್ಮೆಯ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ .. ಅವರು ದೇವಕಣದ ಪಿತಾಮಹನಿಸಿಕೊಂಡರು.. ಅವರ ಗೌರವಾರ್ಥವಾಗಿ ಆ ಕಣಗಳಿಗೆ ಬೋಸಾನ್ ಗಳು ಎಂದು ಹೆಸರಿಸಲಾಗಿದೆ.. ಈ ಕಣಗಳೇ ವಿಶ್ವದ ಉಗಮಕ್ಕೆ ಕಾರಣ ಎಂದು ನಿರ್ಧರಿಸಲಾಯಿತು..


ಅವರು ಪ್ರತಿಪಾದಿಸಿದ ಸಿದ್ಧಾಂತಗಳು ಬೋಸ್–ಐನ್ಸ್‌ಟೀನ್ ಸಾಂಖ್ಯಿಕ ಶಾಸ್ತ್ರ & ಹಿಗ್ಸ-ಬೋಸಾನ್ ಕಣ ಎಂದು ಪ್ರಸಿದ್ಧಿ ಪಡೆದಿದೆ..


ಕುತೂಹಲವೇ ವಿಜ್ಞಾನಿಯ ಮೊದಲ ಹೆಜ್ಜೆ.. ಅಡೆತಡೆಗಳು ಬಂದಾಗ ಪ್ರಯೋಗಾಲಯ ಅದಕ್ಕೆ ಪರಿಹಾರವಾಗುತ್ತದೆ. ವಿಫಲತೆ ಹೋಗಲಾಡಿಸಲು ಹೊಸ ಹೆಜ್ಜೆಗಳನ್ನು ಸಾಧಿಸುವ ಬಾಗಿಲಿನ ಕಡೆ ಇಡಲೇಬೇಕು..

 ವಿಜ್ಞಾನ ವಿಶ್ವ ಮಾತ್ರವಲ್ಲ ಮನುಕುಲವನ್ನೂ ಕಲಕುತ್ತದೆ..

ಧೈರ್ಯ ಮತ್ತು ಪರಿಶ್ರಮ ಇದ್ದರೆ ಬದಲಾವಣೆ ಖಂಡಿತಾ ಸಾಧ್ಯ...

-ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು