Wednesday, December 3, 2025

 ಕಠೆ-963. 

ಶ್ರವಣದೋಷ ಒಂದೆಡೆ, ಪುಟ್ಟ ಮಕ್ಕಳು ಇನ್ನೊಂದೆಡೆ, ಸಮಸ್ಯೆಗೆ ಓಡದೆ ಓದಿ ಐಎಎಸ್ ಅಧಿಕಾರಿಯಾದ ಮಹಿಳೆಯ ಕಥೆ..


ಐಎಎಸ್‌, ಐಪಿಎಸ್‌ (IAS, IPS) ಅಧಿಕಾರಿಯಾಗುವ ಹಂಬಲದಲ್ಲಿ ಅದೆಷ್ಟೋ ಜನ ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC Exam) ಹತ್ತಾರು ಪ್ರಯತ್ನಗಳನ್ನು ಮಾಡಿ, ಗೆಲುವು ಸಾಧಿಸಿದವರೂ ಇದ್ದಾರೆ, ಹಾಗೆಯೇ ಕನಸನ್ನು ಕೈಬಿಟ್ಟವರೂ ಇದ್ದಾರೆ. ಯಾವುದೇ ಕೆಲಸ ಫಲ ನೀಡಬೇಕು ಅಂದ್ರೆ ಅಲ್ಲಿ ನಮ್ಮ ಪ್ರಯತ್ನ ಇರಬೇಕು. ಒಂದು ಸಾರಿ ಆಗಿಲ್ಲ ಅಂದ ಮಾತ್ರಕ್ಕೆ ಪ್ರಯತ್ನ ಬಿಡಬಾರದು. ನಮ್ಮ ಸತತ ಪ್ರಯತ್ನ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ. ಅಂಥದ್ಧೆ ಒಂದು ಸಾಧನೆಯನ್ನು ಇಲ್ಲೊಬ್ಬ ಮಹಿಳೆ ಮಾಡಿದ್ದಾಳೆ.

ಕನಸಿಗೆ ವಯಸ್ಸಿನ ಮಿತಿಯಿಲ್ಲ, ಕೆಲ ಆರೋಗ್ಯ ಸಮಸ್ಯೆ ಕೂಡ ಸಾಧನೆಗೆ ಅಡ್ಡ ಬರೋದಿಲ್ಲ.


ಅನಿವಾರ್ಯ ಮದುವೆ, ನಂತರ ಮಕ್ಕಳು ಆದ್ಮೇಲೆ ಮುಗೀತು ಜೀವನ ಅನ್ನೋರ ನಡುವೆ ಈಕೆ ತಮ್ಮ ಹೊಸ ಬದುಕನ್ನು ಆರಂಭಿಸಿದವಳು. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುವ ದೊಡ್ಡ ನಿರ್ಧಾರವನ್ನು ಕೈಗೆತ್ತಿಕೊಂಡರು. ಆಗ ವಯಸ್ಸು 40, ಎರಡು ಮಕ್ಕಳ ತಾಯಿ, ಒಂದು ಉದ್ಯೋಗವನ್ನು ನಿರ್ವಹಿಸುತ್ತಾ,

ಮಕ್ಕಳನ್ನು ಬೆಳೆಸುತ್ತಾ,

ಮತ್ತು ಶ್ರವಣ ಅಸಮರ್ಥತೆ ಎಂಬ ಸವಾಲಿನೊಂದಿಗೆ ಹೋರಾಡುತ್ತಾ

7ನೇ ಪ್ರಯತ್ನದಲ್ಲಿ UPSC ಉತ್ತೀರ್ಣಳಾದಳು.

ಅವರೇ ನಿಶಾ ಉನ್ನಿರಾಜನ್ ಕೇರಳದ ತಿರುವನಂತಪುರದವರು


ಶಾರ್ಟ್‌ಕಟ್ ಇಲ್ಲ, ಅವರು ಅಳವಡಿಸಿಕೊಂಡ ಶಿಸ್ತು ಮತ್ತು ನಿರಂತರ ಪ್ರಯತ್ನ ಅವಳ ಕೈ ಹಿಡಿದಿತ್ತು...


ಜೀವನ ಅವಳನ್ನು ಎಷ್ಟು ಸಲ ಕೆಳಗೆ ಬೀಳಿಸಿದರೂ,

ಪ್ರತಿ ಸಲ ಮತ್ತಷ್ಟು ಬಲವಾಗಿ ಎದ್ದು ನಿಂತರು..

ವಯಸ್ಸು ಅಡ್ಡಿ ಅಲ್ಲ, ಜವಾಬ್ದಾರಿಗಳು ತಡೆ ಅಲ್ಲ, ವಿಫಲತೆ ಕುಗ್ಗಿಸಲಿಲ್ಲ ಎಂಬುದು ಸಾಬೀತಾಯಿತು.

- ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು