Saturday, December 13, 2025

 ಕಥೆ-972

ನಿಶ್ಚಿಂತೆಯ ನಗು ತರಿಸಲು ಸಾಧ್ಯವಾ?


ಒಂದು ಲಾಡ್ಜಿಗೆ ಒಬ್ಬರು ರೂಮ್ ಬುಕ್ ಮಾಡಲು ಬಂದರು. ಅವರಿಗೆ ಮೊದಲು ರೂಮ್ ನೋಡಬೇಕಾಗಿತ್ತು. 

ಅದಕ್ಕೆ ಅಲ್ಲಿನ ಮ್ಯಾನೇಜರ್ ಕೇಳಿದಂತೆ 500 ರೂ. ಡಿಪಾಸಿಟ್ ನೀಡಿ ರೂಮು ನೋಡಲು ತೆರಳಿದರು.


ತನ್ನಲ್ಲಿ ಬಂದ 500 ರೂ. ವನ್ನು ಮ್ಯಾನೇಜರ್ ಕಸ ಗುಡಿಸುವಳನ್ನು ಕರೆದು ಅವಳ ಕಳೆದ ತಿಂಗಳ ಸಂಬಳದ ಬಾಕಿ ನೀಡಿದ.


ಅವಳದನ್ನು ಹತ್ತಿರದ ಕ್ಯಾಂಟಿನ್ ಗೆ ಹೋಗಿ ತನ್ನ ತಿಂಗಳ ಲೆಕ್ಕ ಚುಕ್ತ ಗೊಳಿಸಿದಳು.


ಕ್ಯಾಂಟಿನ್ ನ ಮಾಲಕ ಅದನ್ನು ಅಲ್ಲೇ ಇದ್ದ ಹಾಲಿನವನಿಗೆ ನೀಡಿ ಬಾಕಿಗೆ ಜಮಾ ಮಾಡುವಂತೆ ಹೇಳಿದ.


ಹಾಲಿನವ ಸಂತೋಷದಿಂದ ಲಾಡ್ಜಿನ ಪಕ್ಕದಲ್ಲಿರುವ ಪಶು ವೈಧ್ಯರಲ್ಲಿ ಹೋಗಿ ಕಳೆದ ವಾರ 2000 ರೂ. ಚಿಲ್ಲರೆ ಇಲ್ಲದ ಕಾರಣ ಔಷದ ಹಣದಲ್ಲಿ 500 ರೂ.ಬಾಕಿ ಕೂಡ ಬೇಕಿತ್ತು ಎಂದು ಹೇಳಿ ಕೊಟ್ಟ.


ವೈದ್ಯ ಕೂಡಲೇ 500 ರೂ. ಲಾಡ್ಜಿನ ಮ್ಯಾನೇಜರರಿಗ ನೀಡಿ ತನ್ನ ರೂಮ್ ಬಾಡಿಗೆಯ ಬಾಕಿ ನೀಡಿ ಮುಗುಳ್ನಗೆ ಬೀರಿದ.


ಅಷ್ಟರಲ್ಲಿ ಗ್ರಾಹಕ ತನಗೆ ರೂಮ್ ಇಷ್ಟವಾಗಿಲ್ಲ ಎಂದು ತಾನು ನೀಡಿದ ತನ್ನ 500 ರೂ. ಮ್ಯಾನೇಜನಿ೦ದ ಹಿಂಪಡೆದ.


ನೋಟು ತಿರುಗಿ ಗ್ರಾಹಕನ ಕೈಗೇ ಬ೦ತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು....


ಜೀವವಿರದ ಒಂದು ಬೆಲೆಯುಳ್ಳ ಕಾಗದದ ಚೂರು ಎಲ್ಲರ ಸಾಲಗಳನ್ನು ತೀರಿಸಿ ಅವರ ಮೊಗದಲ್ಲಿ ನಿಶ್ಚಿಂತೆಯ ನಗುವನ್ನು ತರಿಸಲು ಕಾರಣವಾದರೆ.... ಜೀವವಿರುವ ನಾವುಗಳು ಎಷ್ಟು ಮೊಗಗಳಲ್ಲಿ ನಗೆಯನ್ನು ತರಿಸಲು ಕಾರಣವಾಗಿದ್ದೇವೆ.?


ಯೋಚಿಸುವ ಪರಿ ನಮಗೆ ಬಿಟ್ಟದ್ದು . ಸಿಟ್ಟು, ಸೇಡು, ಹಠ, ಅಹಂಕಾರ, ಅಸಹಕಾರ,ದರ್ಪ ದೂರವಿಟ್ಟು ಬುದ್ದಿವಂತಿಕೆಯಿಂದ ಬದುಕಿನ ಕಲೆ ಕಂಡುಕೊಂಡರೆ ನಾವೇ ಸೃಷ್ಟಿಸಿದ ನೋಟಿನ(ಹಣ)ಕ್ಕಿಂತಾ ಎತ್ತರಕ್ಕೆ ಬೆಳೆಯಬಹುದು.!


ಕೃಪೆ-ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು