ಕಠೆ-1022
ಚಿತ್ತವೃತ್ತಿ ನಿರೋಧರೂಪಯೋಗ.
ಒಂದು ಇರುವೆ ಬೇವಿನ ಮರದಲ್ಲಿ ವಾಸವಾಗಿತ್ತು. ಒಂದು ದಿನ ಅಲ್ಲಿಗೆ ಸಕ್ಕರೆ ಬೆಟ್ಟದ ಇರುವೆ ಬಂದಿತು. ಇದನ್ನು ತನ್ನ ಸಕ್ಕರೆ ಬೆಟ್ಟಕ್ಕೆ ಕರೆದೊಯ್ದಿತು. ಆದರೆ ಅಲ್ಲಿಯೂ ಬೇವಿನ ಮರದ ಇರುವೆಗೆ ಎಲ್ಲವೂ ಕಹಿ ಕಹಿಯಾಗಿತ್ತು. ಏಕೆಂದರೆ ದಾರಿ ಬುತ್ತಿ ಇರಲೆಂದು ಅದು ತನ್ನ ಬಾಯಿಯಲ್ಲಿ ಒಂದು ಬೇವಿನ ಕಡ್ಡಿ ಹಿಡಿದಿತ್ತು. ಆ ಬೇವಿನಕಡ್ಡಿ ತೆಗೆದೊಗೆದಾಗ ಬೇವಿನ ಮರದ ಇರುವೆಗೆ ಎಲ್ಲೆಲ್ಲೂ ಸವಿ ಸವಿ, ಸ್ವರ್ಗಸ್ವರ್ಗ !! ನಾವಾದರೂ ನಮ್ಮಲ್ಲಿರುವ ಭೂತಕಾಲದ ಎಲ್ಲ ಕಹಿ ವೃತ್ತಿಗಳನ್ನು ನಿರೋಧಿಸಿದಾಗ
ನಮಗೂ ಸರ್ವತ್ರ ಸವಿ-ಸ್ವರ್ಗ!! ಇದುವೇ ಚಿತ್ತವೃತ್ತಿ ನಿರೋಧರೂಪಯೋಗ.
-ಶ್ರೀ ಸಿದ್ಧೇಶ್ವರ ಸ್ವಾಮೀಜಿ
No comments:
Post a Comment