Sunday, February 1, 2026

 ಕಥೆ-1023

ಕನಸಿನಿಂದ ಕಟ್ಟಡವರೆಗೆ


C. J. Roy ಕಾನ್ಫಿಡೆಂಟ್ ಗ್ರೂಪಿನ ನಾಯಕ ಬಹಳಷ್ಟು ಸಾಧಕರಿಗೆ ಅವರೊಂದು ಸ್ಪೂರ್ತಿ.. ಅವರ ಸಾವು ಎಲ್ಲರಿಗೂ ನೋವು ತರುವಂತದ್ದು ...


 ಸಣ್ಣ ಊರಲ್ಲಿ ಹುಟ್ಟಿದ್ದ

ರಾಯ್ ದೊಡ್ಡ ಮನೆಯಲ್ಲಿ ವಾಸವಾಗಿರಲಿಲ್ಲ.

ಅವನು ಆಟ ಆಡುವ ಸಂದರ್ಭದಲ್ಲಿ, ಆಟಿಕೆಗಳಿಗಿಂತ

ಕನಸುಗಳೇ ಹೆಚ್ಚಾಗಿದ್ದವು. ಅವನು ಆಗಾಗ್ಗೆ ಆಕಾಶದ ಕಡೆ ನೋಡುತ್ತಾ ಹೇಳುತ್ತಿದ್ದ,

“ನಾನು ದೊಡ್ಡವನಾದಾಗ ಜನರಿಗೆ ಉಪಯೋಗವಾಗುವ ಕೆಲಸ ಮಾಡಬೇಕು.” ಎಂದು


ಬಾಲ್ಯದಲ್ಲೇ ಕಲಿತ ಪಾಠ ಒಂದೇ: “ಜೀವನ ಸುಲಭವಲ್ಲ, ಆದರೆ ಪ್ರಯತ್ನ ಮಾಡಿದರೆ ಅಸಾಧ್ಯವಲ್ಲ.”

ಆದರೆ “ಪ್ರಯತ್ನಿಸದೆ ಹೇಗೆ ಗೊತ್ತಾಗುತ್ತದೆ?”


ರಾಯ್ ಶಾಲೆಗೆ ತುಂಬಾ ಇಷ್ಟಪಟ್ಟು ಹೋಗುತ್ತಿದ್ದ.

ಅವನಿಗೆ ಅಂಕಗಳ ಆಸಕ್ತಿಗಿಂತ

ಕಲಿಯುವ ಆಸಕ್ತಿ ಹೆಚ್ಚಾಗಿತ್ತು..


ಶಿಕ್ಷಕರ ಒಂದು ಮಾತು ಅವನ ಮನಸ್ಸಿನಲ್ಲಿ ಉಳಿದುಕೊಂಡಿತ್ತು..

ಅದೇನೆಂದರೆ, ಶ್ರಮವಿಲ್ಲದೆ ಯಶಸ್ಸು ಇಲ್ಲ...

ಶಾಲೆ ಮುಗಿದ ನಂತರ ಜೀವನ ಸುಲಭವಿರಲಿಲ್ಲ.. ಹಣ ಇರಲಿಲ್ಲ…ಕೆಲಸ ಸಿಗಲಿಲ್ಲ…


ಆದರೂ ರಾಯ್ ಹೇಳುತ್ತಿದ್ದ

“ನಾನು ಪ್ರಯತ್ನ ಬಿಡುವುದಿಲ್ಲ.”


 ಒಂದು ಸಣ್ಣ ಮನೆ ಕಟ್ಟುವ ಕೆಲಸ ಆರಂಭಿಸಿದ.

ಜನರು “ಇದರಿಂದ ಏನು ಆಗುತ್ತದೆ?” ಎಂದರು.


ಆದರೆ ರಾಯ್ ಮನಸ್ಸಿನಲ್ಲಿ ಹೇಳಿಕೊಂಡನು,

“ಇಂದು ಸಣ್ಣದು, ನಾಳೆ ದೊಡ್ಡದು.

ಒಂದು ಕೆಲಸ ಮುಗಿದಾಗ ಇನ್ನೊಂದು ಕೆಲಸ ಸಿಕ್ಕಿತು.


ಸಣ್ಣ ಕೆಲಸಗಳು ದೊಡ್ಡ ಕೆಲಸಗಳಾದವು.

ರಾಯ್ ಕಟ್ಟಿದ ಮನೆಗಳಲ್ಲಿ ಜನರು ಸಂತೋಷದಿಂದ ವಾಸಮಾಡಿದರು.


ಅವನು ತನ್ನ ಸಂಸ್ಥೆಗೆ ಒಂದು ಹೆಸರು ಇಟ್ಟ

“ಕಾನ್ಫಿಡೆಂಟ್ ಗ್ರೂಪ್"

 

ರಾಯ್ ಗೆ ತನ್ನ ಮೇಲೆ ನಂಬಿಕೆ ಇತ್ತು ಅಲ್ಲದೆ ತನ್ನ ಶ್ರಮದ ಮೇಲೆ ನಂಬಿಕೆ ಇತ್ತು.. ಇದು 

ಇಂದು ರಾಯ್ ದೊಡ್ಡ ಸಂಸ್ಥೆಯ ನಾಯಕ.

ಅವನ ಕಟ್ಟಿದ ಮನೆಗಳು ಸಾವಿರಾರು.

ಅವನ ಕೆಲಸದಿಂದ ಸಾವಿರಾರು ಜನರಿಗೆ ಉದ್ಯೋಗ.


ಅವರು ಮಕ್ಕಳಿಗೆ ಹೇಳೋರು...

“ನಾನು ನಿಮ್ಮಂತೆಯೇ ಒಮ್ಮೆ ಮಗು. ನನ್ನನ್ನು ದೊಡ್ಡವನಾಗಿಸಿದ್ದು ನನ್ನ ಕನಸು ಶ್ರಮ & ಆತ್ಮವಿಶ್ವಾಸ..


ಇವು ನಿಮ್ಮಲ್ಲೂ ಇವೆ.

ಅವುಗಳನ್ನು ನಂಬಿ.”

 ಸಣ್ಣ ಆರಂಭವೇ ದೊಡ್ಡ ಯಶಸ್ಸಿನ ಬೀಜ

 ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ

 ಕನಸು ಕಾಣುವವರಿಗೆ ಭವಿಷ್ಯ ಬೆಳಗುತ್ತದೆ.. ಸಾಧನೆ ಮಾಡುವಾಗ ಕಷ್ಟಗಳು ಬಂದರೂ ಧೈರ್ಯ ಕಳೆದುಕೊಳ್ಳಬಾರದು..

ನಿರಂತರ ಕಲಿಕೆ ಬಹಳ ಮುಖ್ಯ

 ಪ್ರಾಮಾಣಿಕತೆ ಮತ್ತು ಶ್ರಮ ಎಂದಿಗೂ ವಿಫಲವಾಗುವುದಿಲ್ಲ..


ದೊಡ್ಡ ಸಾಧಕರಾಗಲು ಬೇಕಾದದ್ದು...

ಕನಸು, ಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ...

ಕೃಪೆ-ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು