ಕಥೆ-1021
ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....
ನಿಜವಾಗಿ ಹೇಳಬೇಕೆಂದರೆ ನಾವು ಹೊರುವ ಅತಿ ಭಾರವಾದ ಹೊರೆಯೇ ನಕಾರಾತ್ಮಕ ಚಿಂತನೆ. ಸಾಧ್ಯವಿಲ್ಲ, ಕಷ್ಟ, ನನಗೆಲ್ಲಿ ಆಗುತ್ತೆ.. ಈ ಪದಗಳು ಏಕಾಏಕಿ ನಮ್ಮಸುಪ್ತಮನಸ್ಸಿನೊಳಗಿಳಿಯುವ ವಿಷ. ಕುಳಿತವನು ಏಳಲಾಗುವುದೇ ಇಲ್ಲ ಎಂದು ಕುಳಿತಲ್ಲೇ ಕೂತು 'ನಕಾರಾತ್ಮಕತೆಯನ್ನು ಭಜಿಸಿದರೆ ಕೊಳೆತು ಹೋಗುತ್ತಾನೆಯೇ ಹೊರತು, ನಿಂತು ನಡೆಯಲಾರ.
ಒಮ್ಮೆ ನಕಾರಾತ್ಮಕದ ಕೆಸರು ನಮ್ಮೊಳಗೆ ತುಂಬಿಕೊಂಡಿತೆಂದರೆ ನಮ್ಮ ಶಕ್ತಿ, ಉಲ್ಲಾಸವನ್ನೆಲ್ಲಾ ಗೊಬ್ಬರ ಮಾಡಿಬಿಡುತ್ತದೆ. ಜೊತೆಗೆ ಇದರ ಹೊರೆ ಅದೆಷ್ಟಿರುತ್ತದೆಂದರೆ, ಯಾವುದೇ ಕೆಲಸದ ಮುನ್ನ ನಮ್ಮನ್ನು ಹಗ್ಗ ಹಾಕಿ ಕಟ್ಟುತ್ತದೆ. ನಾಲಿಗೆಯಲ್ಲಿ ಆಗುವುದಿಲ್ಲವೆಂದು ಹೇಳು ಎಂದು ಹಿಂಸಿಸುತ್ತದೆ. ಕಣ್ಣಿನಲ್ಲಿ ತುಂಬಿಕೊಂಡ ಕನಸುಗಳಿಗೆ ಮಸಿ ಬಳಿಯುತ್ತದೆ. ಒಟ್ಟಾರೆ ಮುಂದಡಿ ಇಡಲು ನಾನಾ ಭಯಗಳನ್ನು ತುಂಬಿ ಆತ್ಮವಿಶ್ವಾಸದ ಟ್ಯಾಂಕನ್ನು ಖಾಲಿ ಮಾಡಿಬಿಡುತ್ತದೆ. ನನಗೆ ಸಾಧ್ಯ, ಮುಂದೇನಾಗುವುದೋ ಆಗಲಿ ಎಂದು ಆ ಹೊರೆಯನ್ನು ದೂಡಿ ಮುಂದಡಿ ಇಟ್ಟಾಗ ಬಾಗಿಲುಗಳು ತೆರೆಯುತ್ತವೆ, ಅವಕಾಶಗಳು ಕೈಬೀಸುತ್ತವೆ. ತುಟಿಯಂಚಿನಲ್ಲಿ ನಗೆಯ ಬುಗ್ಗೆ ಪುಟಿದೇಳುತ್ತದೆ. ಮತ್ತಿನ್ಯಾಕೆ ಈ ಹೊರೆ .... ನಮ್ಮ ಇಂಧನವನ್ನು ಸಕಾರಾತ್ಮಕವಾಗಿ ಬಳಿಸಿ.
ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....
-ವಸು ವತ್ಸಲೆ
No comments:
Post a Comment