ಕಥೆ-1020
ಉಪ್ಪಿನ ಅರಿವು
ಒಂದಾನೊಂದು ಕಾಲದಲ್ಲಿ ಮಧುರಾಪುರ ಎಂಬ ರಾಜನಿಗೆ ಮೂವರು ಹೆಣ್ಣು ಮಕ್ಕಳು ಇದ್ದರು. ಒಂದು ದಿನ ರಾಣಿ ರಾಜನಿಗೆ ಕೇಳುತ್ತಾಳೆ. ಮುಂದೆ ಈ ಸಿಂಹಾಸನ ಮೆಟ್ಟಿಲೇರುವರು ಯಾರು ಎಂದು ಕೇಳುತ್ತಾಳೆ. ಆಗ ರಾಜ ಹೇಳುತ್ತಾನೆ. ಮೂವರು ಮಕ್ಕಳನ್ನು ಕರೆಯುತ್ತಾನೆ. ಮೊದಲನೆ ಮಗಳು ಬರುತ್ತಾ ಏನು ಅಪ್ಪಾಜಿ ಎಂದು ಕೇಳುತ್ತಾಳೆ ನಾನು ನಿನಗೆ ಎಷ್ಟು ಇಷ್ಟ ಎಂದು ಕೇಳುತ್ತಾನೆ. ಆಗ ಭಾನುಮತಿ ಜೇನುತಪ್ಪ ಎಷ್ಟು ಇಷ್ಟವೋ ನೀವು ಅಷ್ಟೇ ಇಷ್ಟ ಎಂದು ಹೇಳುತ್ತಾಳೆ. ಗೋಮತಿಯನ್ನು ಕರೆಯುತ್ತಾನೆ. ಆಗ ಗೋಮತಿ ಹೇಳುತ್ತಾಳೆ ಸಕ್ಕರೆ ನನಗೆ ಎಷ್ಟು ಇಷ್ಟವೋ ನೀವು ಕೂಡಾ ನನಗೆ ಅಪ್ಪ ಇಷ್ಟ ಎಂದು ಹೇಳುತ್ತಾಳೆ. ಇವರಿಬ್ಬರ ಮಾತು ಕೇಳಿ ರಾಜನಿಗೆ ಸಂತೋಷವಾಗುತ್ತದೆ ಆಗ ರಾಜ ಕೊನೆಯ ಮಗಳಾದ ಸುಮತಿಯನು ಕರೆಯುತ್ತಾನೆ. ಆಗ ಸುಮತಿ ಹೇಳುತ್ತಾಳೆ ಅಪ್ಪಾಜಿ ನಿಜ ಹೇಳಬೇಕೆಂದರೆ ಉಪ್ಪಿನ ರುಚಿ ಎಷ್ಟು ಇದೆಯೋ ಅಷ್ಟೇ ನೀವು ನನಗೆ ಇಷ್ಟ ಎಂದು ಹೇಳುತ್ತಾಳೆ ಅವಳ ಮಾತು ಕೇಳಿ ರಾಜನಿಗೆ ಕೋಪ ಬಂದಿತು. ಕೆಲವು ವರ್ಷಗಳ ಕಳೆದವು ರಾಜನು ಬಾನುಮತಿಗೆ ಮದುವೆ ಮಾಡಿದನು. ಮಗಳಿಗೆ ಆನೆ ಹೊರವಷ್ಟು ಉಡುಗೊರೆ ಕಳುಹಿಸಿದನು ಅದೆ ವೈಭವದಲ್ಲಿ ಗೋಮತಿಗೂ ಸಹ ಮದುವೆ ಮಾಡಿದನು ಆಕೆಗೆ ಕುದುರೆ ಹೊರುವಷ್ಟು ಉಡುಗೊರೆ ಕಳುಹಿಸಿದನು. ಆದರೆ ಸುಮತಿಗೆ ಒಬ್ಬ ಕುಂಬಾರನ ಜೊತೆಗೆ ಮದುವೆ ಮಾಡಿದನು ಮಗಳಿಗೆ ಕಪ್ಪೆ ಹೊರುವಷ್ಟು ಉಡುಗೊರೆ ಕೊಟ್ಟನು. ಕೆಲವು ವರ್ಷಗಳು ಉರುಳಿದವು ರಾಜನು ಬಾನುಮತಿ ಮನೆಗೆ ಹೋದನು. ಆದರೆ ಬಾನುಮತಿ ತಂದೆಯ ಸೇವೆ ಮಾಡದೆ ಸಖಿಯರ ಜೊತೆ ಕಾಲ ಕಳೆದಳು ಇದರಿಂದ ರಾಜನಿಗೆ ತುಂಬಾ ಬೇಸರವಾಯಿತು. ಗೋಮತಿಯ ಮನೆಗೆ ಹೋದನು. ಅವಳು ಸಹ ಹಾಗೆ ಮಾಡಿದಳು. ಕೊನೆಗೆ ರಾಜ ಸುಮತಿ ಮನೆಗೆ ಹೋದನು. ಸುಮತಿಯು ಅಪ್ಪನನ್ನು ಕಂಡು ಅಡುಗೆ ಮನೆಯಿಂದ ಓಡಿ ಬಂದಳು ರಾಜನಿಗೆ ಖುಷಿಯಾಯಿತು. ಅವಳು ತಂದೆ ಸೇವೆ ಮಾಡಿದಳು, ರಾಜನು ಊಟ ಮಾಡುವಾಗ ಇದೇನಿದು ಸಾರು ಸಪ್ಪಗಾಗಿದೆ ಎಂದು ರಾಜ ಕೇಳುತ್ತಾನೆ. ಆಗ ಸುಮತಿ ಹೇಳುತ್ತಾಳೆ. ಅಪ್ಪ ಅವತ್ತು ನೀವು ನಾನು ಉಪ್ಪಿನ ರುಚಿ ಹೇಳಿದಾಗ ನೀವು ಕೋಪಗೊಂಡು ಬಿಟ್ಟಿರಿ ಅದಕ್ಕೋಸ್ಕರ ನಾನು ಇವತ್ತು ಉಪ್ಪು ಹಾಕದೆ ಅಡುಗೆ ಮಾಡಿದ್ದೇನೆ ಎಂದು ಹೇಳುತ್ತಾಳೆ. ಆಗ ರಾಜನಿಗೆ ಉಪ್ಪಿನ ಅರಿವಾಗುತ್ತದೆ. ಅದಕ್ಕೆ ರಾಜನು ಈಕೆಯ ಜಾಣತನವನ್ನು ಮೆಚ್ಚಿ ನೀನೆ ಮಧುರಾಪುರ ಸಿಂಹಾಸನ ಏರಬೇಕು ಎಂದು ರಾಜನು ಸುಮತಿಯನ್ನು ಕರೆದುಕೊಂಡು ಹೋದನು...ಅವಳಿಗೆ ಪಟ್ಟಾಭಿಷೇಕ ಮಾಡಿದ...
No comments:
Post a Comment